ಹೊತ್ತಾರೆಯ ಮುಸುಕಿನಲಿ
ಅರುಣೋದಯದ ಸ್ವಾಗತಕೆ
ಕಾದು ನಿಂತಿರುವಂತೆ ಕಂಡಿದ್ದು
ಅದು ನೀನೆ ಏನು?
ಬಾವಿಕಟ್ಟೆಯ ಬದಿಗೆ ನೀರನು
ಒಯ್ಯಲು ಬಂದು
ನಗುನಗುತ ನಿಂತವಳು
ಅದು ನೀನಲ್ಲವೇನು?
ಸೂರ್ಯ ನೆತ್ತಿಯ ಮೇಲಿರಲು
ಮುಂಬಾಗಿಲ ಕಟ್ಟೆಯ ಮೇಲೆ
ಜಡೆಹಾಕುತ ಕೂತವಳು
ಅದು ನೀನಲ್ಲದೆ ಮತ್ತೇನು?
ಕಾಲದ ಪರಿವಿಲ್ಲದೆ ಹಸಿವಿನ ಅರವಿಲ್ಲದೆ
ಕಣ್ಣತುಂಬ ಮಾಸದ ಚಿತ್ರಗಳಾಗಿರುವವಳು ನೀನೇನು?
ಕಾಮೆಂಟ್‌ಗಳಿಲ್ಲ :
ಕಾಮೆಂಟ್ ಪೋಸ್ಟ್ ಮಾಡಿ