ಬುಧವಾರ, ಸೆಪ್ಟೆಂಬರ್ 26, 2012
ನನ್ನ ಪದ್ಯ......
ಮಣ್ಣಗೊಂಬೆ
ಇದೇ ಮಣ್ಣು,
ಇದರ ಮೇಲೆ ಜೀವಕಳೆ
ಶತಕೋಟಿಯ
ಪಳೆಯುಳಿಕೆಯ ದೂಳು
ಗಾಳಿ, ಬಿಸಿಲು, ಮಳೆಯ ಸೂಳು
ಪಂಚಭೂತಗಳ ಕಾಳು
ಜೀವಿಯ ಮೂಲ ಅಜೀವಕ
ಚರಗಳು
ಸೃಷ್ಟಿಗೆ-ಪೋಷಣೆಗೆ
ಹಲವು ಪೂರಕಗಳು
ಸಕಲ
ಜೀವಿ-ಅಜೀವಿಗಳಿಗೆ ನಾನಾ ಆಕಾರ
ಎಲ್ಲವೂ ಮಣ್ಣ
ಸೃಷ್ಟಿ,
ಮಣ್ಣೆ ಪೋಷಕ
ತಾನೆ ಶೋಷಕ
ಅದುವೇ ವಿನಾಶಕ,
ಸಾವಯವ ಸೃಷ್ಟಿ
ಸಾವಯವಿ...
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು
(
Atom
)