ಗುರುವಾರ, ಏಪ್ರಿಲ್ 3, 2014


ಕವಿತೆಗೆ ಕಪ್ಪು ಶಾಹಿ

ಹೇಳು ಗೆಳತಿ ಸೌಂಧರ್ಯ ಕಾರಣವೆ ಪ್ರೀತಿಗೆ
ಹೃದಯಗಳು ಸಾಲದೆ  ಭಾವನೆಗಳ ಬರವಸೆಗೆ
ಹೇಳು, ನಿನ್ನ ನಗು ಮೊಗವೊಂದೆ ನಮ್ಮ ಗೆಳೆತನದ ರಾಯಭಾರಿಯಲ್ಲವೆ?
ನಿಜಹೇಳು, ಅಂದು ಕಂಡ ಮಿಂಚುವ ಕಣ್ಣುಗಳೇ ನಮ್ಮ ಗೆಳೆತನವ ಬೆಸೆದಿಲ್ಲವೆ?

ಎಷ್ಟೋ ಸುಂದರವಾದ ಹೂವು ಕೂಡ ಬಾಡದಿರುವುದೇ?
ಮಿಂಚುವ ಕಣ್ಣುಗಳು ಸಹಾ ಮಂದವಾಗದಿರುವುದೇ?
ಹಬ್ಬದ ಉಡುಗರೆಯು ಹಳತಾಗದಿರುವುದೇ?
ಕರಿಯರ ಗುಲಾಮರನ್ನಾಗಿಸಿದ ರಾಷ್ಟ್ರಕ್ಕೆ ಕರಿಯ ನಾಯಕನಾಗಿಲ್ಲವೆ?

ಭಾವನೆಗಳಿಗೆ ಸ್ಪಂದಿಸುವ, ಪ್ರೀತಿಯಿಂದ ನೋಡುವ
ಅಕ್ಕರೆಯ ಸಂಗಾತಿಗಾಗಿ ಪ್ರೇಮಾಂಕುರವಾಗದಿರುವುದೇ?
ಕೆಂದುಟಿಗಳಿಗೆ, ಹಾಲ್ಗೆನ್ನೆಗಳಿಗೆ ಅವನತಿ ಇರಬಹುದು
ನಿಜಪ್ರೇಮವು ಸಮಯಕ್ಕೆ ಸೋತ ಸಾಕ್ಷಿ ಇದೆಯೇ?

ಹೌದು, ನೀನೂ ಬಿಳಿಬಣ್ಣದವಳಲ್ಲ
ನಿಜ, ಆದರೆ ನನ್ನ ಭಾವನೆಗಳ ಕವಿತೆಗೆ ಕಪ್ಪು ಶಾಹಿಯಾಗಬಲ್ಲೆ....