ಚಲುವು...
ಅದೇನು ಚಂದವೋ,
ಅದೇನು ಅಂದವೋ....
ನೀ ನಿಂತ ನಿಲುವು,
ಚಂದ್ರಮನ ಎಳೆಯೋ....
ಮಂದಾರ ಹೂವೋ,
ನಿನ್ನಲ್ಲಿ ಕಂಡ ಚಲುವು....
ಹಿರೆಕೆರೆಯ ತಾವರೆಯ
ಮೀರಿಸಿದ ಕಣ್ಣುಗಳು,
ಹಾಲ್ನೊರೆಯ ಬೆರೆಸಿದ
ದೇಹಸಿರಿಯ ಅಂಗಗಳು.
ಎಂಥ ಒನಪು?
ನೀ ಮುಂಗೂದಲು ಸರಿಸುತಿರಲು,
ಅದೆಂಥ ಹೊಳಪು?
ನೀ ನಸುನಗು ನಗುತಿರಲು.
ಗುಳಿಕೆನ್ನೆ ತಗ್ಗು, ಕರಿಕಪ್ಪು ಹುಬ್ಬ
ಸಹ್ಯಾದ್ರಿ ತಪ್ಪಲಂತೆ,
ನಡು ಸಣ್ಣ ಸೊಂಟ ತುಂಬೆದೆಯ ಉಬ್ಬು
ಕೊಡಚಾದ್ರಿ ಸಾಲಂತೆ.
ಹಸೆಯಿಂದ ಕಸಿದು ತಂದ
ಕೈಯತುಂಬ ಮದರಂಗಿ,
ಇಷ್ಟವಾದೆ ನನಗೆ ನೀನು
ತುಂಬು ಮೈಯ ಸುಂದರಾಂಗಿ.
ಅಂದ ಚಂದ ನಲ್ಲೆ ನೀನು
ನನ್ನ ಮನದ ಚಂದ್ರಿಕ,
ಅಚ್ಚು ಮೆಚ್ಚು ನನಗೆ ನೀನು
ನಾನು ನಿನ್ನ ಪ್ರಿಯ ಲೇಖಕ.