ಮಂಗಳವಾರ, ಏಪ್ರಿಲ್ 14, 2015

ನೀನೆ ಇಂಗಿತ...


ಓ ಕೋಗಿಲೆ ಹೊಸರಾಗ ಹಾಡಿದೆ,
ಓ ದುಂಬಿಂಯೇ ಎನೋ ಗಾನಗುನುಗಿದೆ
ನಿನದೆ ಧ್ವನಿಯ ನಿನದೇ ಪ್ರತಿಧ್ವನಿಯು,
ನಿನದೆ ಸವಿಯ ನೀನೆ ಸವಿರುಚಿಯು.

ನಿನ್ನ ರಾಗ ಲಹರಿ ಇಂದು,
ಎಷ್ಟು ಮಧುರವಾಗಿದೆ.
ಅನುರಾಗ ಕೆದರಿ ಇನ್ನು,
ನೀ ಇಷ್ಟವಾಗಿದೆ.

ತಿಳಿಯೇ ಸಖಿಯೇ
ನಾನೆ ನೀನ್ನ ಇನಿಯ
ಅರಿಯೇ ತೆರೆಯೇ
ಒಲವ ಕರೆಯ

ಆ ತಾರೆ ಎಕೆ ನೀನೆ ಬೆಳಗುವೆ
ಮಂದಾರ ಬೇಕೆ ನೀನೆ ಅರೀಯೆ
ಆ ಗೀತೆ ಗೀಚೆ ಈ ಹೃದಯಕೆ
ಇ ದ್ವೀಪ ಹಚ್ಚೆ ನನ್ನ ಬಾಳ ಜ್ಯೋತಿಗೆ

ನೀ ರಾಚೊ ಬಣ್ಣ ರಂಗು ರಂಜಿತ
ನೀ ತೋರೊ ಮೌನ ಶಾಂತ ಪ್ರಶಾಂತ
ಈ ಹೃದಯಕೆಂದು ನೀನೆ ಇಂಗಿತ
ನೀ ಹಾಡಬೇಕು ಎಂದು ಪ್ರೇಮ ಸಂಗೀತ

ಮುಂಜಾನೆ ನೀನು ಮೂಡೆ ರಂಗಾವಲಿ
ಮುಸ್ಸಂಜೆ ನೀನು ಹಾಡೆ ಪ್ರೀತಿಯ ಸುವ್ವಾಲಿ
ದಿನವು ಜೊತೆಗೆ ಹೀಗೆ ನೀನು ಹಾಡಲಿ
ನಾನು ನೀನು ಹೀಗೆ ಜೊತೆಯಾಗಿ ಬಾಳಲಿ